ನನ್ನೈನನನೈ ನನ್ನೈನನನೈ ನನ್ನೈನನನೈನೈ ನನ್ನೈನನನೈ

ನನ್ನೈನನನೈ ನನ್ನೈನನನೈ ನನ್ನೈನನನೈನೈ ನನ್ನೈನನನೈ

ಆಕಾಶ ಇಷ್ಟೆ ಯಾಕಿದೆಯೊ ನನ್ನೈನನನೈ

ಈ ಭೂಮಿ ಕಷ್ಟ ಆಗಿದೆಯೊ ನನ್ನೈನನನೈ

ಹಂಚೋಣ ಈ ಪ್ರೀತಿ ಬೇಕಿಲ್ಲ ರಶೀತಿ

ಮುಗಿಲ್ಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರುವ ನಾವೆ

ಗಾಳಿಪಟ ಗಾಳಿಪಟ ಗಾಳಿಪಟ || ಪ ||

ಕನಸಿನ ನೋಟಿಗೆ ಚಿಲ್ಲರೆ ಬೇಕೆ ಓ..

ನಗುವನ್ನು ಎಲ್ಲೊ ಮರೆತಿರು ಏಕೆ ಓ..

ಬಿಸಿಲನ್ನು ಕದ್ದ ಚಂದ್ರನ ಚೂರು

ನಮ್ಮನ್ನು ಪತ್ತೆ ಮಾಡುವರಾರು

ಹೊರಾಡಿದೆ ಈ ಭೂಪಟ

ಹಾರಾಡಿದೆ ನಮ್ಮ ಪಟ

ಗಾಳಿಪಟ ಗಾಳಿಪಟ ಗಾಳಿಪಟ

ಗ ಗ ಗ ಗಾ ಗಾಳಿಪಟ || ೧ ||

ಕಾಮನ ಬಿಲ್ಲು ಬಾಳಿಗೆ ಉಂಟೆ ಓ..

ಸ್ನೇಹಕ್ಕು ಕೂಡ ರೇಷನ್ ಬಂತೆ ಓ..

ಸಂಭ್ರಮಕಿಲ್ಲ ಸೀಸನ್ ಟಿಕೇಟು

ಏರಿಸಬೇಕು ನಮ್ಮ ರಿಬೇಟು

ಇದು ಪ್ರೀತಿಯ ಚಿತ್ರಪಟ

ಈ ದೋಸ್ತಿಯೆ ನಮ್ಮ ಜಟ

ಗಾಳಿಪಟ ಗಾಳಿಪಟ ಗಾಳಿಪಟ || ೨ ||

ದಿಗಂತ್ ಗಣೇಶ್ ಜಯಂತ್ ಕಾಯ್ಕಿಣಿ ರಾಜೇಶ್ ಕೃಷ್ಣನ್ ವಿ. ಹರಿಕೃಷ್ಣ 

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail