ಕಲ್ಲಾದರೆ ನಾನು

ಎಸ್. ಪಿ. ಬಾಲಸುಬ್ರಮಣ್ಯಂ ಎಸ್. ನಾರಾಯಣ್ ದೇವ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ || ಪ ||

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ

ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ

ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ

ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ

ಪದವಾದರೆ ನಾನು ಪಂಪನ ಪುಟದಲಿ ಮೆರೆವೆ

ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ

ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ || 1 ||

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ

ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ

ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ

ಸ್ವರವಾದರೆ ನಾನು ದಾಸರ ಕಂಠದಿ ನಲಿವೆ

ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ

ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ || 2 ||

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!