ಕನಸಲು

ಶ್ರೇಯಾ ಗೋಶಾಲ್ ಶಶಾಂಕ್ ಅರ್ಜುನ್ ಜನ್ಯ

ಎವ್ರಿ ಮಾರ್ನಿಂಗ್, ಐ ರಿಮೆಂಬರ್ ಯು

ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು

ಮೈ ಹಾರ್ಟ್ ಸೇಸ್ ದಟ್ ಐ ಲವ್ ಯು

ಅಂಡ್ ಮೈ ಸೋಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು

ಕನಸಲು ನೂರು ಬಾರಿ

ಕರೆಯುವೆ ನಿನ್ನೆ ನಾನು

ಅಭ್ಯಾಸವಾಗಿ ಹೊದೆ ನೀ ಜೀವಕೆ || ಪ ||

ಒಬ್ಬಳೆ ಕೂರದಾರೆ

ಯಾರನು ಸೇರದಾರೆ

ನೀ ಬೇಕು ಎಲ್ಲಾ ಗಳಿಗೆಯು

ಸಿಗಬೇಕು ಪೂರ್ತಿ ಸಲುಗೆಯು

ಆಸೆಬುರುಕಿ ತುಂಬಾ ನಾನು, ಸಹಿಸು ನೀನು || ಅನು ||

ಈ ಕೊರಳಿಗೆ ನಿನ್ನ

ಉಸಿರಿನ ಬಯಕೆಯು

ಮುಂಗುರುಳಿಗೆ ನಿನ್ನ

ಬೆರಳಿನ ಹುಡುಕಾಟವು

ನಡೆವೆನು ಹಿಂಬಾಲಿಸಿ

ನೆರಳನು ನಾ ಸೋಲಿಸಿ

ಅತಿಯಾದ ಪ್ರೀತಿ ಬೇಡುವೆ

ಬೆಂಬಿಡದೆ ನಿನ್ನ ಕಾಡುವೆ

ಹುಚ್ಚು ಹುಡುಗಿ ತುಂಬಾ ನಾನು, ಸಹಿಸು ನೀನು|| 1 ||

ನೀ ಪೀಡಿಸು ನನ್ನ

ಪ್ರೀತಿಸೊ ವಿಷಯದಿ

ಆಲಂಗಿಸು ಬಿಡದೆ

ವಿಷಮದ ಪ್ರತಿ ನಿಮಿಷದಿ

ಉಳಿದರು ನಿನ್ನೊಂದಿಗೆ

ಅಳಿದರೂ ನಿನ್ನೊಂದಿಗೆ

ಇರಬೇಕು ನಾನು ಮಾತ್ರವೇ

ನಿನ್ನಲ್ಲಿ ಎಲ್ಲಾ ಕ್ಷಣದಲೂ

ಹೊಟ್ಟೆಕಿಚ್ಚು ತುಂಬಾ ನನಗೆ, ಸಹಿಸು ನೀನು|| ೨ ||