ಮಧುರ ಪಿಸುಮಾತಿಗೆ

ಮೊಹಿತ್, ಶಮಿತಾ ಮಲ್ನಾಡ್ ಜಯಂತ್ ಕಾಯ್ಕಿಣಿ ಅರ್ಜುನ್

ಮಧುರ ಪಿಸುಮಾತಿಗೆ ಅದ್ರ ತುಸು ಪ್ರೀತಿಗೆ

ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ

ಸೋತೆ ನಾನು ನಿನ್ನ ಪ್ರೀತಿಗೆ ಓ... ಚೂರಾದೆ ಒಂದೆ ಭೇಟಿಗೆ|| ಪ ||

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ

ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ

ನಿನ್ನದೇ ಪರಿಮಳ ನಿನ್ನಯ ನೆನಪಿಗೆ

ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ ಓ...

ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ

ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ

ನಿನ್ನದೇ ಹೆಸರಿದೆ ಕನಸಿನ ಊರಿಗೆ

ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ ಓ...