ಮಳೆ ಬರುವ ಹಾಗಿದೆ

ಶ್ರೇಯಾ ಗೋಶಾಲ್ ಜಯಂತ್ ಕಾಯ್ಕಿಣಿ ಮನೋಮೂರ್ತಿ

ಮಳೆ ಬರುವ ಹಾಗಿದೆ ಮನವೀಗ ಹಾಡಿದೆ

ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ

ಸವಿಗನಸು ಕಾಡಿದೆ ನಸುನಗುವು ಮೂಡಿದೆ

ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ|| ಪ ||

ನಿನ್ನ ನಗುವಿನಲ್ಲೇ ನನ್ನ ನಸುಕು

ನಿನ್ನ ರೂಪಧರಿಸಿ ಬಂದು ನಲಿದಾಡಿದೆ ಬೆಳಕು

ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ

ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ|| 1 ||

ಎದೆಯ ಬಾಗಿಲಲ್ಲೇ ನಿನ್ನ ಸುಳಿವು

ಸಣ್ಣ ಆಸೆಯಲ್ಲೇ ನಮ್ಮ ಸಹವಾಸದ ನಲಿವು

ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ

ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ|| 2 ||