ನಗು ಎಂದಿದೆ

ಎಸ್. ಜಾನಕಿ ಆರ್. ಎನ್. ಜಯಗೋಪಾಲ್ ಇಳಯರಾಜ

ನಗು ಎಂದಿದೆ ಮಂಜಿನ ಬಿಂದು

ನಲಿ ಎಂದಿದೆ ಗಾಳಿ ಇಂದು

ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ ಬಾ

ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ

ಹಾರಲು ಆಗದೆ ಸೋತಿರಲು

ಬಾಳಿಗೆ ಗೆಳೆಯನು ಬೇಕಿರಲು

ಬಯಸಿದೆ ಅರಸಿದೆ ನಾ

ಕಂಡೆ ಈಗಲೇ ನಾ ನನ್ನ ಸ್ನೇಹಿತನ

ಇದೆ ನಗುವ ಮನದ ಸ್ಪಂದ

ಸವಿ ಮಧುರ ಮಮತೆ ಬಂಧ

ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ

ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ

ಪ್ರಕೃತಿಯು ಬರೆದ ಕವನವಿದು

ಮಮತೆಯ ಸೊಗಸಿನ ಪಲ್ಲವಿಯು

ಸುಂದರ ಸ್ನೇಹವಿದು

ಇಂತ ಅನುಬಂಧ ಎಂತ ಆನಂದ

ಇದೆ ನಗುವ ಮನದ ಸ್ಪಂದ

ಸವಿ ಮಧುರ ಮಮತೆ ಬಂಧ