ನೀ ಎಂದರೆ ನನ್ನೊಳಗೆ

ಸೋನು ನಿಗಮ್ ಜಯಂತ್ ಕಾಯ್ಕಿಣಿ ವಿ. ಹರಿಕೃಷ್ಣ

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.

ನಾ ಬರೆಯದಾ ಕವಿತೆಗಳ ನೀನೆ ಒಂದು ಸಂಕಲನ.

ಓ ಜೀವವೇ ಹೇಳಿಬಿಡು, ನಿನಗೂ ಕೂಡಾ ಹೀಗೆನಾ? || ಪ ||

ತಂದೆನು ಪಿಸುಮಾತು ಜೇಬಲ್ಲಿ.

ಕಂಡೆನು ಹಸಿ ಮಿಂಚು ಕಣ್ಣಲ್ಲಿ.

ಬಂದೆನು ತುಸು ದೂರ ಜೊತೆಯಲ್ಲಿ.

ಮರೆತು ಮೈಮನ.

ನಿನ್ನ ಬೆರಳು ಹಿಡಿದು ನಾನು

ನೀರ ಮೇಲೆ ಬರೆಯಲೇನು?

ನಿನ್ನ ನೆರಳು ಸುಳಿಯುವಲ್ಲೂ

ಹೂವ ತಂದು ಸುರಿಯಲೇನು?

ನಂಬಿ ಕೂತ ಹುಂಬ ನಾನು, ನೀನೂ ಹೀಗೇನ? || 1 ||

ಹೂವಿನ ಮಳೆ ನೀನು ಕನಸಲ್ಲಿ

ಮೋಹದ ಸೆಲೆ ನೀನು ಮನಸಲ್ಲಿ.

ಮಾಯದ ಕಲೆ ನೀನು ಎದೆಯಲ್ಲಿ.

ಒಲಿದ ಈ ಕ್ಷಣ.

ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು.

ಒಂದೇ ಕನಸು ಕಾಣುವಾಗ ನಾನು ನೀನು ಬೇರೆಯೇನು?

ಶರಣು ಬಂದ ಚೋರ ನಾನು, ನೀನು ಹೀಗೆನ? || 2 ||