ನೀನು ಇರದೆ

ಅರ್ಮಾನ್ ಮಲಿಕ್, ಅನುರಾಧ ಭಟ್ ಜಿ. ಗಂಗಾಧರ್ ಅರ್ಜುನ್ ಜನ್ಯ

ನೀ ಎದೆಯೊಳಗೆ ಬಂದ ಮೇಲೆ

ಹೃದಯ ಕನಸುಗಳ ಪಾಕಶಾಲೆ

ನೀ ನಸುನಗುತ ಕಣ್ಣಿನಲ್ಲೆ

ತೆರೆದೆ ಒಲವೆಂಬ ಪಾಠಶಾಲೆ

ಹೇಳೆ ಗೆಳತಿಯೆ ಹೇಗೆ ಇರಲಿ ನಾ

ನೀನು ಇರದೆ... ನಾನು ಇರೆನು|| ಪ ||

ಹಾ ಹಠ ಮಾಡುತ್ತೆ ಜೀವ ಪುಟ್ಟ ಕಂದನಂತೆ

ನೀ ಇರಬೇಕಂತೆ ಎಂದೆಂದು ಹೀಗೆಯೇ ಜೊತೆ

ಗಡಿಯಾರಕೀಗ ಏನೋ ವೇಗ ಬಂದಂತೆ

ನಿನ್ನ ಸಂಗದಲ್ಲಿ ಕಾಲ ಓಡುತಿರುವಂತೆ|| ೧ ||

ನಾ ತುಸು ಏಕಾಂತ ಬೇಕಂತ ಕಾಡು ನೋಡ ಹೋದೆ

ಆ ಪ್ರತಿ ಹೆಜ್ಜೆಲು ಎಲ್ಲೆಲ್ಲು ನೀ ಕಾಡಿದೆ

ಅಲೆಮಾರಿ ಜೀವ ಸಿಲುಕಿ ನಿನ್ನ ಮೋಹಕ್ಕೆ

ರಹದಾರಿ ಸಿಕ್ಕ ಹಾಗೆ ಸೀದ ಸ್ವರ್ಗಕ್ಕೆ|| ೨ ||