ತಿರುಪತಿ ಗಿರಿವಾಸ

ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ ಕೆ. ಪ್ರಭಾಕರ ಶಾಸ್ತ್ರಿ ಟಿ. ಜಿ. ಲಿಂಗಪ್ಪ

ಕಲ್ಯಾಣಾದ್ಭುತ ಗಾತ್ರಾಯ

ಕಾಮಿತಾರ್ಥ ಪ್ರದಾಯಿನೇ

ಶ್ರೀಮದ್ ವೆಂಕಟನಾಥಾಯ

ಶ್ರಿನಿವಾಸಾಯ ತೇ ನಮಃ

ತಿರುಪತಿ ಗಿರಿವಾಸ ಶ್ರೀ ವೆಂಕಟೇಶ

ನೀನೊಲಿದ ಮನೆ ಮನೆಯು ಲಕ್ಷ್ಮೀ ನಿವಾಸ || ಪ ||

ಅಖಿಲಾಂಡ ಕೋಟಿ ಬ್ರಹ್ಮಾಂಡಪಾಲ

ಅಲಮೇಲು ಮಂಗನೊಲ್ಲಾಸಲೋಲ || 1 ||

ಪಕಜಲೋಚನ ಪತಿತೋದ್ಧಾರ

ಸಂಕಟಹರಣ ಸುಧಾರಸಧಾರ

ಶಂಕಚಕ್ರಧರ, ಶ್ರೀಕರ ಸುಂದರ

ನಿತ್ಯ ವಿನುತನ ಸಾಕ್ಷಾತ್ಕಾರ

ವೇದ ಶಾಸ್ತ್ರಸಾರ, ಸಕಲ ಸೂತ್ರಧಾರ || ೨ ||

ಶಿರಸಾ ನಮಾಮಿ ಮನಸಾ ನಮಾಮಿ