ಲಾಲಿಸಿದಳು ಮಗನ

ಪುರಂದರ ದಾಸರು

ಲಾಲಿಸಿದಳು ಮಗನ, ಯಶೋದೆ

ಲಾಲಿಸಿದಳು ಮಗನ || ಪ ||

ಅರಳೆಲೆ ಮಾಂಗಾಯಿ ಬೆರಳಿಗುಂಗುರವಿಟ್ಟು

ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ || 1 ||

ಬಾಲಕನೆ ಕೆನೆ ಹಾಲು ಮೊಸರನೀವೆ

ಲೀಲೆಯಿಂದಲಿ ಎನ್ನ ತೋಳ್ಮೇಲ್ ಮಲಗೆಂದು || ೨ ||

ಮುಗುಳುನಗೆಯಿಂದ ಮುದ್ದು ತಾ ತಾರೆಂದು

ಜಗದೊಡೆಯನ ಶ್ರೀ ಪುರಂದರವಿಠಲನ || ೩ ||