ಬಾಗಿ ಬಾಗಿ ಬಂಗಾರ ತೂಗಿ

ಜಾನಪದ

ಬಾಗಿ ಬಾಗಿ ಬಂಗಾರ ತೂಗಿ

ಬೆಳ್ಳಿ ಮೂಡಿ ಬೆಳಗಾದವಮ್ಮ

ಗೋಕುಲ ಹೊಳಗೆ ಸಂಭ್ರಮವೆನ್ನಿರೆ

ನಂದಾನ ಕಂದ ಗೋವಿಂದ || ಬಾಗಿ ||

ನಂದಾನ ಕಂದಾ ಗೋವಿಂದ ಕೃಷ್ಣನ

ಚಂದಾದಿ ತೊಟ್ಟಿಲೊಳಗಿಟ್ಟು

ಚಂದಾದಿ ತೊಟ್ಟಿಲೊಳಗಿಟ್ಟು ಗೋಪಮ್ಮ

ನಂದಾದಿ ತೂಗುತ್ತ ಪಾಡಿದಳೆ || ಬಾಗಿ ||

ಪೂತನಿಯ ಕೊಂದಾನೆ ಶಕಟನ ಮುರಿದಾನೆ

ಕಾಳಿಂಗ ಮಡುವ ಕಲಕಿದಾನೆ

ಕಳಿಂಗ ಮಡುವ ಕಲಕಿದ ಶ್ರೀಕೃಷ್ಣ

ರಕ್ಕಾಸರೆಲ್ಲದ ಮಡುವಿದನೆ || ಬಾಗಿ ||

ಗೋವ್ಗಳ ಕಾಯ್ದನೆ ಬೆಣ್ಣೆಯ ಮೆದ್ದಾನೆ

ಬೆಟ್ಟಲ್ಲಿ ಬೆಟ್ಟಾವನೆತ್ತಿದಾನೆ

ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ

ಗೋಪ್ಯಾರ ಸೀರೆ ಕದ್ದೊಯ್ದಾನೆ || ಬಾಗಿ ||