ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ

ಜಾನಪದ

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ

ಎಳ್ಳು ಜೀರಿಗೆ ಬೆಲೆಯೋಳ | ಭೂಮ್ತಾಯ

ಎದ್ದೊಂದು ಘಳಿಗೆ ನೆನೆದೇನೋ ||

ಎಳ್ಳುಕೊಟ್ಟವನಿಗೆ ಎಲ್ಲಾ ಭಾಗ್ಯವು ಬರಲಿ

ಎಳ್ಳಕ್ಕಿ ಮೇಲೆ ಮಗ ಬರಲಿ | ಆ ಮನೆಗೆ

ಮಲ್ಲಿಗೆ ಮುಡಿಯೋ ಸೊಸೆ ಬರಲಿ ||

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗಿಯ

ಜಲ್ಲ ಜಲ್ಲಾನೆ ಉದುರಮ್ಮ | ನಾ ನಿನಗೆ

ಬೆಲ್ಲದಾರತಿಯ ಬೆಳಗೇನು ||

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ

ಕಲ್ಲು ಕಾವೇರಿ ಕಂಪನಿಯ | ನೆನ್ದಾರೆ

ಹೊತ್ತಿದ್ದ ಪಾಪಾ ಪರಿಹಾರ ||