ನವ್ವಾಲೆ ಬಂತಪ್ಪ ನವ್ವಾಲೆ

ಜಾನಪದ

ನವ್ವಾಲೆ ಬಂತಪ್ಪ ನವ್ವಾಲೆ

ಸೋಗೆಯ ಬಣ್ಣಾದ ನವ್ವಾಲೆ || ಪ ||

ಬತ್ತವ ಮೆಯ್ಯೋದು ನವ್ವಾಲೆ

ಬತ್ತದ ಹೊಟ್ಟೊಂದು ಮೆಯ್ಯೋದು ನವ್ವಾಲೆ

ಬತ್ತವ ಕಾಯೋರು ಓಡಿಸಿ ಬಂದಾರೆ

ಅತ್ತಿತ್ತಓಡಿತು ನವ್ವಾಲೆ ||

ರಾಗಿಯ ಮೆಯ್ಯೋದು ನವ್ವಾಲೆ

ರಾಗಿ ಹೊಟ್ಟೊಂದು ಮೆಯ್ಯೋದು ನವ್ವಾಲೆ

ರಾಗಿಯ ಕಾಯೋರು ಓಡಿಸಿ ಬಂದಾರೆ

ರಾಗವ ಪಾಡಿತು ನವ್ವಾಲೆ ||

ಸರಸತಿ ಏರೋದು ನವ್ವಾಲೆ

ಅದು ಸಸಿರ ಕಣ್ಣೀನ ನವ್ವಾಲೆ

ಸರಸತಿ ಏರಿಕೊಂಡು ನಲಿದಾಡಿ ಬರುವಾಗ

ಜಾಗರವಾಡಿತು ನವ್ವಾಲೆ ||