ನೋಡವಳಂದಾವ

ಜಾನಪದ

ನೋಡವಳಂದಾವ ಮೊಗ್ಗಿನ

ಮಾಲೆ ಚಂದಾವ ||

ಬೆಟ್ಟಾ ಬಿಟ್ಟಿಳಿಯುತಲಿ ಬಿಟ್ಯಾಳೇ

ಬಿಟ್ಟಾಳೆ ಮಂಡೇಯ

ಹುಟ್ಟೀರೊ ಲಂಗ ಹುಲಿಚರ್ಮ

ಹುಟ್ಟೀರೊ ಲಂಗ ಹುಲಿಚರ್ಮಾ ಚಾಮುಂಡಿ

ಬೆಟ್ಟಾ ಬಿಟ್ಟಿಳಿಯೊ ಸಡಗಾರ ||

ತಾಯಿ ಚಾಮುಂಡಿಯ

ಬಾಲಾಸು ರಂಗದ ಮೇಲೆ

ಜಾತಾರ ಆದವ್ನೆ ಎಳೆನಾಗೆ ಎಳೆಸರುಪ

ತಾಯಿ ಚಾಮುಂಡಿಗೆ ಬಿಸಿಲೆಂದು ||

ತಾಳೆ ಹೂ ತಂದಿವ್ನಿ

ತಾಳ್ ತಾಯೇ ಚಾಮುಂಡಿ

ಮೇಗಾಳ ತೋಟದ ಮರುಗಾವ

ಮೇಗಾಳ ತೋಟಾದ ಮರುಗಾವಾ ತಂದಿವ್ನಿ

ಒಪ್ಪಿಸಿಕೊಳ್ಳಿ ಹರಕೆಯ ||