ಪಂಚಮಿ ಹಬ್ಬಕ್ಕ್

ಜಾನಪದ

ಪಂಚಮಿ ಹಬ್ಬಕ್ಕ್ ಉಳ್ದಾವ ದಿನ ನಾಕ

ಅಣ್ಣ ಬರಲಿಲ್ಲ ಯಾಕಾ ಕರಿಯಾಕ || ಪ ||

ನಮ್ಮ ತವರೂರು ಗೋಕುಲನಗರ

ಮನೆಯಂಥಾ ರಾಜಮಂದಿರ

ನಮ್ಮ ಅಣ್ಣಯ್ಯ ಭಾರಿ ಸಾಹುಕಾರ

ಅಣ್ಣ ಬರಲಿಲ್ಲ ಯಾಕಾ ಕರಿಯಾಕ ||

ನಮ್ಮ ತವರಲ್ಲಿ ಪಂಚಮಿ ಭಾರಿ

ಹರಳು ಅವಲಕ್ಕಿ ತಂಬಿಟ್ಟು ಸೂರಿ

ನಿನು ತಿನ್ನೋಕೆ ಮನೆಗೆ ಬಾರ

ಎಂಗಾದೀತು ತಂಗಿ ಮರೆಯಾಕೆ ||

ನನ್ನ ಗೆಳತೀರು ಮಡ್ತಾರೆ ಗೇಲಿ

ಅವ್ರು ಆಡೋದು ಅಲ್ಲಿ ಜೊಕಾಲಿ

ಹಬ್ಬ ಬಂದ್ರು ಬರಲಿಲ್ಲ ಅಣ್ಣ ಯಾಕ

ಮನಸು ಹರಿತೈತೆ ತವರಿಗೊಗಾಕ ||