ಸುವ್ವಿ ಉವ್ವಮ್ಮ ಲಾಲಿ

ಜಾನಪದ

ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲಿ

ಜಾಣೆ ಜಾಗರದ ಹೆಣ್ಣೆ ಸುವ್ವಲಾಲಿ ||

ಒಂದೂರ ಒಂದು ಕೇರಿ ಸುವ್ವಲಾಲಿ

ಒಂದೂರ ತಿರುಗಿ ಬಂದೆ ಸುವ್ವಲಾಲಿ

ಒಂದು ಕಾಸಿಗೆ ಮಾರಲಿಲ್ಲ

ಮುಂದೇನು ಗತಿ ಎಂದ

ಸುವ್ವಿ ಸುವ್ವಿ ಸುವ್ವಿ ಸುವಮ್ಮ ಲಾಲಿ ||

ಬಳೆಗಾರ ಬಂದವ್ನೆ ಸುವ್ವಲಾಲಿ

ಬಳೆಗಳನು ತಂದವ್ನೆ ಸುವ್ವಲಾಲಿ

ಏರ್ ಕಟ್ನಲ್ ನಿಂದವನೆ

ಸುವ್ವಿ ಸುವ್ವಿ ಸುವ್ವಿ ಸುವಮ್ಮ ಲಾಲಿ ||

ರೂಪಾಯಿಗ್ಯಾವ ಬಳೆ ಸುವ್ವಲಾಲಿ

ಎಂಟಾಣಿಗ್ಯಾವ ಬಳೆ ಸುವ್ವಲಾಲಿ

ನಾಲ್ಕಾಣಿಗ್ಯಾವ ಸೀರೆ

ಎರಡಾಣಿಗ್ಯಾವ ಸೀರೆ

ಸುವ್ವಿ ಸುವ್ವಿ ಸುವ್ವಿ ಸುವ್ವಮ್ಮ ಲಾಲಿ ||