ಸಾರ್ವತ್ರಿಕ ಚುನಾವಣೆ - ೨೦೧೯

೨೦೧೯ ರ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 11 ರಿಂದ 19 ಮೇ 2019 ವರೆಗೆ ಏಳು ಹಂತಗಳಲ್ಲಿ ಭಾರತದ ೧೭ ನೇ ಲೊಕಸಭೆಗಾಗಿ ನಡೆಯಿತು. ಈ ಚುನಾವಣೆಯಲ್ಲಿ ಸುಮಾರು ೯೦ ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದು, ಇದರಲ್ಲಿ ೬೭% ರಷ್ಟು ಭಾರತೀಯರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. ಇದು ಈವರೆಗಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅತ್ಯಧಿಕವಾಗಿದೆ.

ಭಾರತದ ಸಂವಿಧಾನದ ನಿರ್ದೇಶನದಂತೆ ಲೋಕಸಭೆಯಲ್ಲಿ ಗರಿಷ್ಠ ೫೫೨ (೫೫೦ ಚುನಾಯಿತ ಮತ್ತು ೨ ಆಂಗ್ಲೋ-ಇಂಡಿಯನ್) ಸದಸ್ಯರು ಹೊಂದಬಹುದಾಗಿದೆ. ಚುನಾಯಿತ ಸದಸ್ಯರಲ್ಲಿ ಯಾರು ಆಂಗ್ಲೋ-ಇಂಡಿಯನ್ ಆಗಿರದಿದ್ದ ಪಕ್ಷದಲ್ಲಿ ೨ ಆಂಗ್ಲೋ-ಇಂಡಿಯನ್ ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೫ ಸದಸ್ಯರಿದ್ದು, ಅವುಗಳಲ್ಲಿ ೫೩೦ ಕ್ಷೇತ್ರಗಳು ೨೯ ರಾಜ್ಯಗಳಿಗೆ, ೧೩ ಕ್ಷೇತ್ರಗಳು ೭ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ.

೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ೫೪೨ ಕ್ಷೇತ್ರಗಳಿಗಾಗಿ ಮತದಾನ ಏಳು ಹಂತಗಳಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ

ಕರ್ನಾಟಕದಲ್ಲಿ ೨೦೧೯ರ ಲೋಕಸಭಾ ಚುನಾವಣೆ ೨ ಹಂತಗಳಲ್ಲಿ ಏಪ್ರಿಲ್ ೧೮ ಮತ್ತು ಏಪ್ರಿಲ್ ೨೧ ರಂದು ತಲಾ ೧೪ ಕ್ಷೇತ್ರಗಳಲ್ಲಿ ನಡೆಯಿತು.

ಕರ್ನಾಟಕ ರಾಜ್ಯದ ೨೮ ಕ್ಷೇತ್ರಗಳ ಲೋಕಸಭಾ ಚುನಾವಣಾ ಎಣಿಕೆ ಫಲಿತಾಂಶ ಕೆಳಗಿನಂತಿದೆ.

ಕ್ಷೇತ್ರ ಮುನ್ನಡೆ/ಗೆದ್ದ ಅಭ್ಯರ್ಥಿ ಪಕ್ಷ
1 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ ಭಾರತೀಯ ಜನತಾ ಪಕ್ಷ (BJP)
ಬೆಳಗಾವಿ ಅಂಗಡಿ ಚೆನ್ನಬಸಪ್ಪ ಭಾರತೀಯ ಜನತಾ ಪಕ್ಷ (BJP)
ಬಾಗಲಕೋಟೆ ಜಿ. ಪಿ. ಚಂದನಗೌಡ ಭಾರತೀಯ ಜನತಾ ಪಕ್ಷ (BJP)
ಬಿಜಾಪುರ ಜಿಗಜಿನಗಿ ರಮೇಶ್ ಚಂದಪ್ಪ ಭಾರತೀಯ ಜನತಾ ಪಕ್ಷ (BJP)
ಕಲಬುರಗಿ ಉಮೇಶ್‌ ಜಾಧವ್‌ ಭಾರತೀಯ ಜನತಾ ಪಕ್ಷ (BJP)
ರಾಯಚೂರು ರಾಜಾ ಅಮರೇಶ್ವರ ನಾಯ್ಕ್ ಭಾರತೀಯ ಜನತಾ ಪಕ್ಷ (BJP)
ಬೀದರ್ ಭಗವಂತ ಖೂಬಾ ಭಾರತೀಯ ಜನತಾ ಪಕ್ಷ (BJP)
ಕೊಪ್ಪಳ ಕರಡಿ ಸಂಗಣ್ಣ ಅಮರಪ್ಪ ಭಾರತೀಯ ಜನತಾ ಪಕ್ಷ (BJP)
ಬಳ್ಳಾರಿ ವೈ. ದೇವೇಂದ್ರಪ್ಪ ಭಾರತೀಯ ಜನತಾ ಪಕ್ಷ (BJP)
1೦ ಹಾವೇರಿ ಎಸ್. ಸಿ. ಉದಾಸಿ ಭಾರತೀಯ ಜನತಾ ಪಕ್ಷ (BJP)
1೧ ಧಾರವಾಡ ಪ್ರಹ್ಲಾದ್ ಜೋಷಿ ಭಾರತೀಯ ಜನತಾ ಪಕ್ಷ (BJP)
1೨ ಉತ್ತರ ಕನ್ನಡ ಅನಂತ್ ಕುಮಾರ್ ಹೆಗ್ಡೆ ಭಾರತೀಯ ಜನತಾ ಪಕ್ಷ (BJP)
1೩ ದಾವಣಗೆರೆ ಜಿ. ಎಂ. ಸಿದ್ದೇಶ್ವರ್ ಭಾರತೀಯ ಜನತಾ ಪಕ್ಷ (BJP)
1೪ ಶಿವಮೊಗ್ಗ ಬಿ. ವೈ. ರಾಘವೇಂದ್ರ ಭಾರತೀಯ ಜನತಾ ಪಕ್ಷ (BJP)
1೫ ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಭಾರತೀಯ ಜನತಾ ಪಕ್ಷ (BJP)
1೬ ಹಾಸನ ಪ್ರಜ್ವಲ್ ರೇವಣ್ಣ ಜನತಾದಳ (ಜಾತ್ಯಾತೀತ) (JDS)
1೭ ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ ಭಾರತೀಯ ಜನತಾ ಪಕ್ಷ (BJP)
1೮ ಚಿತ್ರದುರ್ಗ ಎ. ನಾರಾಯಣಸ್ವಾಮಿ ಭಾರತೀಯ ಜನತಾ ಪಕ್ಷ (BJP)
1೯ ತುಮಕೂರು ಜಿ. ಎಸ್. ಬಸವರಾಜ್ ಭಾರತೀಯ ಜನತಾ ಪಕ್ಷ (BJP)
೨೦ ಮಂಡ್ಯ ಸುಮಲತಾ ಅಂಬರೀಷ್‌ ಸ್ವತಂತ್ರ
೨೧ ಮೈಸೂರು ಪ್ರಪ್ ಸಿಂಹ ಭಾರತೀಯ ಜನತಾ ಪಕ್ಷ (BJP)
೨೨ ಚಾಮರಾಜನಗರ ವಿ. ಶ್ರೀನಿವಾಸ ಪ್ರಸಾದ್ ಭಾರತೀಯ ಜನತಾ ಪಕ್ಷ (BJP)
೨೩ ಬೆಂಗಳೂರು ಗ್ರಾಮೀಣ ಡಿ. ಕೆ. ಸುರೇಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)
೨೪ ಬೆಂಗಳೂರು ಉತ್ತರ ಡಿ. ವಿ. ಸದಾನಂದಗೌಡ ಭಾರತೀಯ ಜನತಾ ಪಕ್ಷ (BJP)
೨೫ ಬೆಂಗಳೂರು ಸೆಂಟ್ರಲ್ ಪಿ. ಸಿ. ಮೋಹನ್‌ ಭಾರತೀಯ ಜನತಾ ಪಕ್ಷ (BJP)
೨೬ ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಭಾರತೀಯ ಜನತಾ ಪಕ್ಷ (BJP)
೨೭ ಚಿಕ್ಕಬಳ್ಳಾಪುರ ಬಿ. ಎನ್. ಬಚ್ಚೇ ಗೌಡ ಭಾರತೀಯ ಜನತಾ ಪಕ್ಷ (BJP)
೨೮ ಕೋಲಾರ ಎಸ್. ಮುನಿಸ್ವಾಮಿ ಭಾರತೀಯ ಜನತಾ ಪಕ್ಷ (BJP)