ಕೊಡಗು ಜಿಲ್ಲೆಕೊಡಗು ಎಂದಾಕ್ಷಣ ಥಟ್ಟನೆ ನೆನಪಾಗುವುದು ಕಾಫಿ, ಕಿತ್ತಳೆ ಮತ್ತು ಕೊಡವ ಸಂಸ್ಕೃತಿ. ತನ್ನ ತಣ್ಣನೆಯ ವಾಯುಗುಣದಿದಂದಾಗಿ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿದೆ.

ಕೊಡಗಿನ ಜನತೆಯ ಮನೆ-ಮನಗಳಲ್ಲಿ ಜಾನಪದ ಕಲೆ ಹಾಸು ಹೊಕ್ಕಾಗಿ ಬಂದಿದೆ. ಕತ್ತಿ ಮತ್ತು ಕೋವಿ ಪ್ರಿಯರಾದ ಕೊಡವರಿಗೆ ಅವರ ಜಾನಪದ ನೃತ್ಯಗಳಾದ ಬೊಳಕಾಟ, ಉಮ್ಮತ್ತಾಟ, ಕೋಲಾಟ ಇವೇ ಮುಂತಾದವು ಅತ್ಯಂತ ಪ್ರಿಯ. ಕುಟುಂಬ್ ಮನೆತನಗಳವರೇ ಹಾಕಿ ಆಡುತ್ತಾರೆ.

ಅವರ ನಾಡಹಬ್ಬಗಳಾದ ಹುತ್ತರಿ, ಕಾವೇರಿ ಸಂಕ್ರಮಣ, ಕೈಲ್ ಪೊಳ್ದು ಇವೇ ಮುಂತಾದ ಆಚರಣೆ ಕೊಡಗಿನ ವಿಶಿಷ್ಟ ಸಂಸ್ಕೃತಿಯ ಪ್ರತೀಕವಾಗಿವೆ. ಇವುಗಳ ಆಚರಣೆ ಸಂದರ್ಭದಲ್ಲಿ ಅವರು ಅನುಸರಿಸುವ ವಿಧಾನ, ತೊಡುವ ಉಡುಗೆಗಳು ತಯಾರಿಸುವ ಅಡುಗೆ, ಹಾಡು, ಕುಣಿತ ಎಲ್ಲವೂ ವಿಶಿಷ್ಟ, ವೀಕ್ಷಕರಿಗೆ ಅದೊಂದು ಪ್ರತ್ಯೇಕ ಪ್ರಪಂಚ.

ಫೀಲ್ಡ್ ಮಾರ್ಷಲ್ ಗೌರವಕ್ಕೆ ಪಾತ್ರರಾಗಿದ್ದ ಕೆ. ಎಮ್. ಕಾರ್ಯಪ್ಪ, ಜನರಲ ತಿಮ್ಮಯ್ಯ ಅವರಂತಹ ಸಮರ್ಥ ದಂಡನಾಯಕರು ಜೊತೆಗೆ ಇನ್ನೂ ಹಲವು ಕೊಡವರು ಸೇನೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಸಂಕ್ಷಿಪ್ತ ಮಾಹಿತಿ

ವಿಸ್ತೀರ್ಣ ೪,೧೦೨ ಚ.ಕೀ.ಮೀ.
ಜನಸಂಖ್ಯೆ ೫,೪೮,೫೬೧
ಸಾಕ್ಷರತೆ ೭೮%
ಹೋಬಳಿಗಳು ೧೬
ಒಟ್ಟು ಹಳ್ಳಿಗಳು ೨೯೬
ಗ್ರಾಮ ಪಂಚಾಯ್ತಿ ೯೮
ತಾಲ್ಲೂಕುಗಳು ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ
ತಾಲೂಕು ಪಂಚಾಯ್ತಿ
ನಗರ ಪಟ್ಟಣಗಳು
ನೈಸರ್ಗಿಕ ಸಂಪತ್ತು ೧,೩೪,೫೯೭ ಹೆ. ಅರಣ್ಯ
ಲಿಂಗಾನುಪಾತ ೯೯೬ ಹೆಣ್ಣು : ೧೦೦೦ ಗಂಡು
ನದಿಗಳು ಕಾವೇರಿ, ಹೇಮಾವ್ತಿ, ಲಕ್ಷಣ ತೀರ್ಥ
ಮುಖ್ಯ ಬೆಳೆ ಕಿತ್ತಳೆ, ಏಲಕ್ಕಿ, ಕಾಫಿ, ಟೀ, ರಾಗಿ, ಭತ್ತ, ತೆಂಗು, ಗೇರು, ರಬ್ಬರ್ ಇತ್ಯಾದಿ.
ಉದ್ಯಮಗಳು ಜೇನು, ಕೈಮಗ್ಗ, ಬೆತ್ತದ ಸಾಮಾನುಗಳ ತಯಾರಿಕೆ, ಕುಂಬಾರಿಕೆ, ರಬ್ಬರ್, ಪ್ಲಾಸ್ಟಿಕ್ ಚೀಲ, ಉಕ್ಕಿನ ಪಾತ್ರೆ ತಯಾರಿಕೆ, ಕಾಫಿ ಪರಿಷ್ಕರಣೆ, ಅಕ್ಕಿ ಗಿರಣಿ, ವ್ಯವಸಾಯೋಪಕರಣ, ಇತ್ಯಾದಿ
ಪ್ರವಾಸಿ ತಾಣಗಳು ತಲಕಾವೇರಿ, ಅಬ್ಬೀ ಫಾಲ್ಸ್, ನಿಸರ್ಗಧಾಮ(ಕುಶಾಲನಗರ)


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ