ಡಾ|| ಚಂದ್ರಶೇಖರ ಕಂಬಾರ

Chandrashekhara Kambara

ಕನ್ನಡ ಸಾಹಿತ್ಯದಲ್ಲಿ ನವ್ಯದ ಕಹಳೆ ಜೋರಾಗಿ ಮೊಳಗುತ್ತಿದ್ದ ಅರವತ್ತರ ದಶಕದಲ್ಲಿ, ಉತ್ತರ ಕರ್ನಾಟಕದಿಂದ ಮೂಡಿಬಂದ ಕಾವ್ಯ ಧ್ವನಿಗಳಲ್ಲಿ ಡಾ|| ಚಂದ್ರಶೇಖರ ಕಂಬಾರರ ಹೆಸರು ಪ್ರಮುಖವಾದದ್ದು.

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಂಬಾರರು ನಡೆಸಿರುವ ಪ್ರಯೋಗಗಳು ವೈವಿಧ್ಯಮಯವಾದದ್ದು. ಕಂಬಾರರ ಓದು-ಬರಹಗಳಲ್ಲಿ ಆಧುನಿಕ ಪಾಶ್ಚಾತ್ಯ ಸಾಹಿತ್ಯದ ಛಾಪು ಕಾಣುವುದಾದರೂ, ಅವರ ಪ್ರತಿಭೆಯ ಮೂಲಸೆಲೆ ಇರುವುದು ಜಾನಪದದಲ್ಲಿ.

ಮೇಲ್ನೋಟಕ್ಕೆ ಕಂಬಾರರ ಕೃತಿಗಳ ಮೂಲವಸ್ತು ಮನುಷ್ಯ ಸಮಾಜದ ಮೂಲಕಾಮನೆಗಳು ಹಾಗೂ ಆಕಾಂಕ್ಷೆಗಳು ಎನಿಸಿದರೂ, ಅವರು ಪುರಾಣ-ಜಾನಪದ ಕೇಂದ್ರದಲ್ಲೇ ಇದನ್ನು ಶೋಧಿಸುತ್ತಾ, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ನಿಕಷಕ್ಕೆ ಒಡ್ಡುತ್ತಾರೆ.

ಕಂಬಾರರು ಕಥೆ, ಕಾದಂಬರಿ, ಕವನ, ನಾಟಕ ಯಾವುದೇ ಬರೆಯಲಿ, ಅದರಲ್ಲಿ ಕಾವ್ಯದ ಸ್ಪರ್ಶ ಇದ್ದೆ ಇರುತ್ತದೆ. ಚಂದ್ರಶೇಖರ ಕಂಬಾರರು ರಚಿಸಿರುವ ಮಹಾಕಾವ್ಯ 'ಚಕೋರಿ'ಯ ನಿರೂಪಣೆ ಗದ್ಯ-ಪದ್ಯಗಳೆರಡನ್ನೂ ಹೊಂದಿದೆ.

ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

ಕಂಬಾರರು ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಚಲನಚಿತ್ರ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದ್ದಾರೆ. ಕರಿಮಾಯಿ, ಸಂಗೀತಾ, ಕಾಡುಕುದುರೆ, ಸಿಂಗಾರವ್ವ ಮತ್ತು ಅರಮನೆ ಚಿತ್ರಗಳ ನಿರ್ದೇಶಕರಾಗಿದ್ದಾರೆ. ಕಂಬಾರರು ತಮ್ಮ ಚಿತ್ರಗಳಿಗೆ ಸ್ವತಃ ಸಂಗೀತ ನೀಡಿದ್ದಾರೆ. ಅವರು ಉತ್ತಮ ಜಾನಪದ ಹಾಡುಗಾರರು ಆಗಿದ್ದಾರೆ.

ಸಂಕ್ಷಿಪ್ತ ಮಾಹಿತಿ

ನಿಜನಾಮ ಚಂದ್ರಶೇಖರ ಕಂಬಾರ
ಜನನ 2 ಜನವರಿ 1937
ತಂದೆ ಬಸವಣ್ಣೆಪ್ಪ ಕಂಬಾರ
ತಾಯಿ ಚೆನ್ನಮ್ಮ
ಜನ್ಮ ಸ್ಥಳ ಘೋಡಿಗೇರಿ ಗ್ರಾಮ, ಬೆಳಗಾವಿ ಜಿಲ್ಲೆ

ಕಾವ್ಯಗಳು

1. ಮುಗುಳು 1958
2. ಹೇಳತೇನ ಕೇಳ 1948
3. ತಕರಾರಿನವರು 1971
4. ಸಾವಿರಾರು ನೆರಳು 1979
5. ಬೆಳ್ಳಿ ಮೀನು 1989
6. ಅಕ್ಕಕ್ಕು ಹಾಡುಗಳೆ 1993
7. ಈ ವರೆಗಿನ ಹೇಳತೇನ ಕೇಳ 1993
8. ಹಂಪಿಯ ಕಲ್ಲುಗಳು 2004
9. ಎಲ್ಲಿದೆ ಶಿವಾಪುರ 2009

ನಾಟಕಗಳು

1. ಬೆಂಬತ್ತಿದ ಕಣ್ಣು 1961
2. ನಾರ್ಸಿಸ್ಸ್ 1969
3. ಋಷ್ಯಶೃಂಗ 1970
4. ಜೋಕುಮಾರಸ್ವಾಮಿ 1972
5. ಚಾಲೇಶ 1973
6. ಕಿಟ್ಟಿಯ ಕಥೆ 1974
7. ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ ೧೯೭೫
8. ಜೈಸಿದ್ದನಾಯಕ 1975
9. ಖಾರೋಖಾರ 1977
10. ಮತಾಂತರ 1978
11. ಕಾಡುಕುದುರೆ 1979
12. ಕಾಡುಕುದುರೆ 1979
13. ಆಲಿಬಾಬ 1980
14. ನಾಯಿಕಥೆ 1980
15. ಹುಲಿಯ ನೆರಳು 1980
16. ಹರಕೆಯ ಕುರಿ 1983
17. ಕಂಬಾರ ಅವರ ನಾಟಕಗಳು 1984
18. ಸಾಂಬಶಿವ ಪ್ರಹಸನ 1987
19. ತಿರುಕನ ಕನಸು 1989
20. ಸಿರಿಸಂಪಿಗೆ 1991
20. ಬೋಳೆ ಶಂಕರ 1991
21. ಪುಷ್ಪರಾಣಿ 1991
22. ಮಹಾಮಾಯಿ 1999
23. ನೆಲಸಂಪಿಗೆ 2004
24. ಜಕ್ಕಣ 2008
25. ಶಿವರಾತ್ರಿ 2011

ಮಹಾಕಾವ್ಯ

1. ಚಕೋರಿ 1996

ಕಾದಂಬರಿ

1. ಅಣ್ಣತಂಗಿ 1956
2. ಕರಿಮಾಯಿ 1975
3. ಜಿ. ಕೆ. ಮಾಸ್ತರ್ ಪ್ರಣಯ ಪ್ರಸಂಗ 1982
4. ಸಿಂಗಾರವ್ವ ಮತ್ತು ಅರಮನೆ 1982
5. ಶಿಖರ ಸೂರ್ಯ 2007
6. ಶಿವನ ಡಂಗುರ 2015

ಸಂಶೋಧನಾ ಗ್ರಂಥ

1. ಸಂಗ್ಯಾ ಬಾಳ್ಯಾ 1966
2. ಬಣ್ಣಿಸಿ ಹಾಡವ್ವ ನನ್ನ ಬಳಗ 1968
3. ಬಯಲಾಟಗಳು 1973
4. ಮಾತಾಡೊ ಲಿಂಗವೆ 1973
5. ಉತ್ತರ ಕರ್ನಾಟಕದ ಜಾನಪದ ರಂಗಭೂಮಿ 1980
6. ನಮ್ಮ ಜನಪದ 1980
7. ಬಂದಿರೆ ನನ್ನ ಕೈಯೊಳಗೆ 1981
8. ಜಾನಪದ ವಿಶ್ವಕೋಶ 1985
9. ಬೇಡರ ಹುಡುಗ ಮತ್ತು ಗಿಳಿ 1989
10. ಲಕ್ಷಪತಿ ರಾಜನ ಕಥೆ 1986
11. ಕಾಸಿಗೊಂದು ಸೇರು 1989
12. ನೆಲದ ಮರೆಯ ನಿಧಾನ 1993
13. An Anthology of Modern India Plays for the National School of Drama 2000
14. ಬೃಹತ್ದೇಸಿಯ ಚಿಂತನ 2001
15. ದೇಶಿಯ ಚಿಂತನ 2004
16. ಮರವೆ ಮರ್ಮರವೆ 2007
17. ಇದು ದೇಸಿ 2010

ಸ್ಥಾನಮಾನ

1. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ
2. ನವದೆಹಲಿದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ
3. ಕಾಂಗ್ರೆಸ್ ಪಕ್ಷದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ 2004 - 2010
4. ಹಂಪಿ ಕನ್ನಡ ವಿವಿದ ಮೊದಲ ಉಪಕುಲಪತಿ
5. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು

ಪ್ರಶಸ್ತಿಗಳು ಮತ್ತು ಗೌರವ

1. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ 1975
2. ಕಾಳಿದಾಸ ಸಮ್ಮಾನ್ ಪ್ರಶಸ್ತಿ (ಮಧ್ಯಪ್ರದೇಶ ಸರಕಾರ)
3. ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ('ಜೋ ಕುಮಾರಸ್ವಾಮಿ' ನಾಟಕ) 1975
4. ಟ್ಯಾಗೋರ್‌ ಪ್ರಶಸ್ತಿ (ಶಿಖರ ಸೂರ್ಯ)
5.. ಕುಮಾರ ಆಶನ್ ಪ್ರಶಸ್ತಿ 1982
6. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 1987
7. ನಂದಿಕರ್ ಪ್ರಶಸ್ತಿ (ಕಲ್ಕತ್ತ) 1987
8. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1988
9. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1989
10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಸಿರಿಸಂಪಿಗೆ ನಾಟಕ) 1991
11. ಜಾನಪದ ಮತ್ತು ಯಕ್ಷಗಾನೊ ಅಕಾಡೆಮಿ ಪ್ರಶಸ್ತಿ 1992
12. ಮಾಸ್ತಿ ಪ್ರಶಸ್ತಿ (ಕರ್ನಾಟಕ ಸರಕಾರ) 1992
13. ಪದ್ಮಶ್ರೀ ಪ್ರಶಸ್ತಿ 2001
14. ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರು 2006
15. ಸಂತ ಕಬೀರ್ ಪ್ರಶಸ್ತಿ 2002
16. ಪಂಪ ಪ್ರಶಸ್ತಿ 2004
17. ನಾಡೋಜ ಪ್ರಶಸ್ತಿ 2004
18. ಜೋಶು ಸಾಹಿತ್ಯ ಪುರಸ್ಕಾರಂ 2005
19. ದೇವರಾಜ ಅರಸ್ ಪ್ರಶಸ್ತಿ 2007
20. ಜ್ಞಾನಪೀಠ ಪ್ರಶಸ್ತಿ 2010
21. ಕೇಂದ್ರ ಸಂಗೀತ ನಾಟಕ ಅಕಾಡೆಮಿ 'ರತ್ನ' ಪ್ರಶಸ್ತಿ 2011
22. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ 2021