ಚೋರೆ ಹಕ್ಕಿ, ಭಾರತ ಉಪಖಂಡ ಹಾಗೂ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಪಾರಿವಾಳದ ಜಾತಿಗೆ ಸೇರಿದ ಹಕ್ಕಿ. ಇದು ಗಾತ್ರದಲ್ಲಿ ಪಾರಿವಾಳಗಳಿಗಿಂತ ಚಿಕ್ಕದಿದ್ದು, ಕಡು ಬೂದು ಬಣ್ಣದ ಉದ್ದ ಬಾಲ ಹೊಂದಿರುತ್ತದೆ. ಇದರ ಉದ್ದ 28 ರಿಂದ 32 ಸೆಂಟಿಮೀಟರ್ (11.2 - 12.8 ಇಂಚು) ಇರುತ್ತದೆ.
ಹಳದಿ ಹೊನ್ನಕ್ಕಿ ಅಥವಾ ಅರಿಶಿನ ಬುರುಡೆ, ಮೈನಾ ಗಾತ್ರದ ಹಕ್ಕಿ. ಭಾರತ ಮತ್ತು ಮಧ್ಯ ಏಷ್ಯಾದಲ್ಲಿ ಕಾಣ ಸಿಗುವ ಇವುಗಳು ತೋಪುಗಳು, ಉದ್ಯಾನವನಗಳು, ತೋಟಗಳು, ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತವೆ.
ಮುಂದಿನ ಪೀಳಿಗೆಗೆ ಸಾಹಿತಿ ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ.