ಚೆಲ್ಲಿದರು ಮಲ್ಲಿಗೆಯಾ

ಜಾನಪದ

ಚೆಲ್ಲಿದರು ಮಲ್ಲಿಗೆಯಾ

ಬಾಣಾ ಸುರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ

ಚೆಲ್ಲಿದರು ಮಲ್ಲಿಗೆಯ ||

ಮಾದಪ್ಪ ಬರುವಾಗಾ

ಮಾಳೆಪ್ಪ ಘಮ್ಮೆಂದಿತೊ

ಮಾಳದಲಿ ಗರುಕೆ ಚಿಗುರ್ಯಾವೆ

ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

ಸಂಪಿಗೆ ಹೂವ್ನಂಗೇ

ಇಂಪಾದೊ ನಿನ ಪರುಸೆ

ಇಂಪಾದೊ ನಿನ ಪರುಸೆ

ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ||

ಮಲ್ಲಿಗೆ ಹೂವಿನ ಮಂಚಾ

ಮರುಗಾದ ಮೇಲೊದಪು

ತಾವರೆ ಹೂವು ತಲೆದಿಂಬು

ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

ಹೊತ್ತು ಮುಳುಗಿದರೇನೂ

ಕತ್ತಲಾದರೇನು

ಅಪ್ಪಾ ನಿನ ಪರುಸೆ

ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||