ಒಂದು ಕಾಡಿನ ಮಧ್ಯದೊಳಗೆ

ಜಾನಪದ

ಒಂದು ಕಾಡಿನ ಮಧ್ಯದೊಳಗೆ

ಎರಡು ಮರಗಳ ನಡುವೆ ಮಲಗಿ

ಮೂರು ಕರಡಿಗಳಾಡುತಿದ್ದವು

ನಾಲ್ಕು ಮರಿಗಳ ಸೇರಿಸಿ

ಐದು ಜನರಾ ಬೇಟೆಗಾರರು

ಆರು ಬಲೆಗಳನೆಳೆದುಕೊಂಡು

ಏಳು ಕರಡಿಯ ಹಿಡಿದು, ನೋಡದೆ

ಎಂಟು ಹಿಡಿದೆವು ಎಂದರು

ಒಂಬತ್ತು ಎಂದನು ಅವರಲೊಬ್ಬ

ಹತ್ತು ಎಂದರು ಬೇರೆಯವರು

ಎಣಿಸಿನೊಡಿದರೆಳೆಯೇಳು ಇಲ್ಲಿಗೀ ಕಥೆ ಮುಗಿಯಿತು