ಅಪ್ಪಾ ಐ ಲವ್ ಯೂ

ಅನುರಾಧ ಭಟ್ ವಿ. ನಾಗೇಂದ್ರಪ್ರಸಾದ್ ಅರ್ಜುನ್ ಜನ್ಯ

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೊ ಜಾದುಗಾರ ಅಪ್ಪಾ

ಹಗಲು ಬೆವರಿನ ಕೂಲಿಕಾರ

ರಾತ್ರಿ ಮನೆಯಲಿ ಚೌಕಿದಾರ

ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ

ಗದರೊ ಮೀಸೆಕಾರ

ಮನಸೆ ಕೋಮಲ

ನಿನ್ನ ಹೋಲೊ ಕರ್ಣ ಯಾರಿಲ್ಲ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೊ ಜಾದುಗಾರ ಅಪ್ಪಾ

ಬೆರಳನು ಹಿದಿದರೆ

ವಿಶ್ವಾಸವು ಬೆಳೆವುದು

ಹೆಗಲಲಿ ಕುಳಿತರೆ

ಕುತೂಹಲ ತಣಿವುದು

ನಾನು ಓದೋ ಪಾಠದಲ್ಲಿ

ಅದು ಯಾಕೆ ನಿನ್ನ ಹೆಸರಿಲ್ಲ

ನಿನ್ನ ಹಾಗೆ ಯಾಕೆ ಯಾರಿಲ್ಲ

ನೀನು ಇರುವ ಧೈರ್ಯದಲ್ಲಿ

ಯಾರೊಂದಿಗೂ ನಾ ಸೋಲಲ್ಲ

ನಿನ್ನ ಪ್ರೀತಿ ಮುಂದೆ ಏನಿಲ್ಲ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ನಿನ್ನ ಅಂಗಿ ಬೆವರಿನಲ್ಲಿ

ನಮ್ಮ ಅನ್ನ ಅಡಗಿದೆ

ಮಗಲೆ ಅನ್ನೊ ಮಾತಿನಲ್ಲಿ

ನಿನ್ನ ಮಮತೆ ತಿಳಿದಿದೆ

ತಾಯಿ ಮಾತ್ರ ತವರಲ್ಲ

ತಂದೆ ಇರದೆ ತಾಯಿಲ್ಲ

ಆಕಾಶದಂತೆ ನಿನ್ನ ಮನಸಪ್ಪ

ನಾನು ಎಂದೂ ಹೇಳಿಲ್ಲ

ಯಾಕಂತ ನಂಗೂ ತಿಳಿದಿಲ್ಲ

ನೀನು ಅಂದ್ರೆ ಅಚ್ಚುಮೆಚ್ಚಪ್ಪ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಅಪ್ಪಾ ಐ ಲವ್ ಯೂ ಪಾ

ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ