ಗಮನಿಸು

ಸೋನು ನಿಗಮ್ ಜಯಂತ್ ಕಾಯ್ಕಿಣಿ ಅರ್ಜುನ್ ಜನ್ಯ

ಎವ್ರಿ ಮಾರ್ನಿಂಗ್, ಐ ರಿಮೆಂಬರ್ ಯು

ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಬಿ ದೇರ್ ಫಾರ್ ಯು

ಮೈ ಹಾರ್ಟ್ ಸೇಸ್ ದಟ್ ಐ ಲವ್ ಯು

ಅಂಡ್ ಮೈ ಸೋಲ್ ವಿಲ್ ಗೋ ಆಲ್ವೇಸ್ ಫಾರ್ ಯು

ಗಮನಿಸು ಒಮ್ಮೆ ನೀನು

ಬಯಸಿಹೆ ನಿನ್ನ ನಾನು

ನಂಬದೆ ಏಕೆ ದೋರುವೆ ನನ್ನನು|| ಪ ||

ಹೃದಯದ ಮೂಲೆ ಮೂಲೆ

ದಹಿಸಿದೆ ನಿನ್ನ ಜ್ವಾಲೆ

ಇರಬಹುದೆ ಹೇಳು ಕರಗದೆ

ಬರಬಹುದೆ ನಾರಿ ಮರೆಯದೆ

ಬಿಸಿಯೆ ಇರದ ಉಸಿರು ನಾನು, ನೀನು ಇರದೆ...|| 1 ||

ಎವ್ರಿ ಮಾರ್ನಿಂಗ್...

ನನ್ನ ಜಾಗವೆ ನಿನ್ನ

ಹಿಡಿತಕೆ ಸಿಲುಕಿದೆ

ನಾನಾ ಬಗೆಯ ಭಾವನೆಯ

ಹೊಡೆತಕೆ ಚಡಪಡಿಸಿದೆ

ತಡೆದಿರೊ ಮಾತೆಲ್ಲವು, ತಲುಪಲೆಬೇಕಲ್ಲವೆ

ನಗಬಹುದೆ ಮೌನ ಮುರಿಯದೆ

ಸಿಗಬಹುದೆ ದೂರ ಸರಿಯದೆ

ಕಳೆದು ಹೋದ ಮಗುವೆ ನಾನು, ನೀನು ಇರದೆ...|| ೨ ||

ಚೂರು ಮರೆಗೆ ನೀನು

ಸರಿದರು ಸಹಿಸೆನು

ನೀನೇ ತೆರೆದು ನೋಡು

ಹೃದಯದ ಬೇಗುದಿಯನು

ಬದುಕಲು ಈ ನೂತನ

ನೆಪಗಳೆ ಸಾಕಲ್ಲವೆ

ಕೊಡಬಹುದೆ ನೋವ ಒಲಿಯದೆ

ಬಿಡಬಹುದೆ ಜೀವ ಬೆರೆಯದೆ

ಕಿಟಕಿ ಇರದ ಮನೆಯು ನಾನು, ನಿನು ಇರದೆ..|| ೩ ||

ಎವ್ರಿ ಮಾರ್ನಿಂಗ್...