ಜಾನಪದ

ಎಂಥವನಿರಬೇಕ ಯವ್ವ

ಎಂಥವೈರಬೇಕ

ನಾನು ಮೆಚ್ಚಿ ಮದುವ್ಯಾಗುವ ಗಂಡ

ಎಂಥವನಿರಬೇಕ

ಚುಕ್ಕಿಯ ನಡುವೆ ಚಂದ್ರಮನಂಥ

ಚಂದನ ಮುಖ ಬೇಕ

ಮಾರಿ ಮ್ಯಾಲೆ ಕ್ವಾರಿ ಮೀಸೆ

ಹುರಿ ಮಾಡಿ ತೇರಿ ಬೀಸಿ ಏಸಿನಂತೆರಬೇಕ

ನೊಡಿದವರ ಎದೆ ನಡುಗಬೇಕ

ಊರ ಮುಂದಿನ ಹೊಲಕ

ಹೊಸ ಹೋರಿ ಹೂಡಿ

ಹೆಂಡ್ತಿನ ಹೊಡಿಬೇಕ

ಕೊಂಚ ಒಬ್ಬಳೆ ಇಅರಬೇಕ

ಸ್ಥಿತಿಗತಿ ತಿಳಕೊಂಡು ಪತಿ ಹೋಗದಂತೆ

ಒಕ್ಕುತಲಿರಬೇಕ ಎದೆಯುದ್ದ ಜ್ವಾಳ ಬೆಳೀಬೇಕ

ಆರದಿದ್ರೆ ಹಕ್ಕಿ ಹೊಗೆಯ ಹಾಡಬೇಕ

ನನಗಂಡ ಇಂಥವನಿರಬೇಕ

ಹೊತ್ತಾಗಿ ನಾನು ಬುತ್ತಿಯ ಹೊತುಕೊಂಡು

ಮೆತ್ತಗೆ ಹೋಗಬೇಕ, ಮೆಲ್ಲಗೆ ಅವನ ಕೂಗಬೇಕ

ಅದಕೆ ಓಗುಡುತಿರಬೇಕ

ಹಾಲು ಸಕ್ಕರೆಯಂಥಾ ಸಂಸಾರ ನಮ್ಮದಾಗಬೇಕ

ಅದಕೆ ಶಿವನ ಕರುಣೆ ಬೇಕ

ನನ ಗಂಡ ಇಂಥವನಿರಬೇಕ