ಏನು ಕೊಡ ಏನು ಕೊಡವಾ

ಶಿಶುನಾಳ ಶರೀಫ

ಏನು ಕೊಡ ಏನು ಕೊಡವಾ

ಹುಬ್ಬಳ್ಳಿ ಮಾಟ ಎಂಥ ಚಂದದ ಕೊಡವಾ

ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ

ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂಚುತದ ||

ಆರು ಮಂದಿ ಅಕ್ಕತಂಗಿ ಮೀರಿ ಮಿಂಚಿದ ಕೊಡ

ಮೂವರು ಮುತ್ತೈದೆಯರು ಲೋಲಾಡಿದ ಕೊಡ

ಶಿವರಾತ್ರಿ ಜಾತ್ರಿಗ್ಹೋಗಿ ಸಿದ್ದರಾಮನ ದರ್ಶನವಾಗಿ

ಮುಳ್ಳವ್ವ ಬಾಜಾರದಲ್ಲಿ ಬಾಳಿ ಹೋತವ್ವ ಕೊಡ ||

ಆರು ಮಂದಿ ಅಕ್ಕತಂಗಿ ಜತ್ತಿಲೆ ನೀರಿಗೆ ಹೋಗಿ

ಜರ್ರಂತ ಜಾರಿಬಿತ್ತು ಸಿಗದೆ ಹೋತವ್ವ ಕೊಡ

ಶಿಶುನಾಳಧೀಶ ತಾನೆ ತಿದ್ದಿ ಮಾಡಿದ ಕೊಡ

ಬುದ್ದಿವಂತರು ತಿಳಿದು ನೋಡಬೇಕಾದ ಕೊಡ ||