ಲೋಕದ ಕಾಳಜಿ ಮಾಡತೇನಂತಿ ನೀ

ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ ||

ನೀ ಮಾಡೋದು ಘಳಿಗಿ ಸಂತಿ

ಮೇಲು ಮಾಳಗಿ ಕಟ್ಟಬೇಕಂತಿ

ಆನೆ ಅಂಬಾರಿ ಏರಬೇಕಂತಿ

ಮಣ್ಣಲಿ ಇಳಯೊದ ಥಣ್ಣಗ ಮರತಿ ||

ಬದುಕು ಬಾಳೆವು ನಂದೆ ಅಂತೀ

ನಿಧಿ ಸೇರಿದಷ್ಟೂ ಸಾಲದು ಅಂತಿ

ಕದವ ತೆರೆದು ಕಡೆಯಾತ್ರೆಗೆ ನಡೆವಾಗ

ಒದಗದು ಯಾವುದೋ ಸುಮ್ಮನೆ ಅಳತಿ ||

ನೆಲೆಯು ಗೊವಿಂದನ ಪಾದದೋಳೈತಿ

ಅಲಕೊಂಡು ಹುಡುಕಿದರಿನ್ನೆಲ್ಲೈತಿ?

ಶಿಶುನಾಳುಧೀಶನ ದಯೆಯೊಳಗೈತಿ

ರಸಿಕನು ಹಾಡಿದ ಕವಿತೆಯೊಳೈತಿ ||

ತಾತ್ವಿಕತೆಕವಿತೆ

ಅಕಾಲಮೃತ್ಯು

ಪಿಂಚಿಣಿ ತರುವವನು ಅದೆಷ್ಟು ತಡವಾಗಿ ಸತ್ತರೂ ಅದು ಮಕ್ಕಳ ಪಾಲಿಗೆ ಅಕಾಲಮೃತ್ಯು. ಜೀವವಿಮೆ ಇಳಿಸಿದವರು ಮರುದಿನವೇ ಸತ್ತರೂ ಅದು ಮಡದಿಯ ಪಾಲಿಗೆ ಸಕಾಲ ಮೃತ್ಯು. ಚಿಕ್ಕ ಹೆಂಡತಿ, ಪುಟ್ಟ ಗಂಟು ಬಿಟ್ಟು ಸತ್ತರೆ ಅದಾರ ಪಾಲಿಗೋ ಸಕಾಲ ಮೃತ್ಯು. ಸಾಯದೇ ಉಳಿದರೆ ತನಗೇ ಅನುಗಾಲ ಮೃತ್ಯು.

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail