ಉಲ್ಕೆಗಳು ಅಂತರಿಕ್ಷದಲ್ಲಿ ಬಹು ವೇಗವಾಗಿ ಚಲನೆಯಲ್ಲಿದ್ದರೂ ವಾತಾವರಣದ ಘರ್ಷಣೆಯ ಕೊರತೆಯಿಂದಾಗಿ ಹೊತ್ತಿ ಉರಿಯಲು ಸಾಧ್ಯವಾಗುವುದಿಲ್ಲ. ಭೂಮಿಯ ಗುರುತ್ವಾಕರ್ಷಣ ಬಲದಿಂದಾಗಿ ಇಂತಹ ವಸ್ತುಗಳು ಭೂಮಿಯೆಡೆಗೆ ಸೆಳೆಯಲ್ಪಡುತ್ತವೆ. ಉಲ್ಕೆಗಳು ಭೂ-ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ, ವಾತಾವರಣದ ಘರ್ಷಣೆಯಿಂದಾಗಿ ಹತ್ತಿ ಉರಿಯಲಾರಂಭಿಸುತ್ತವೆ ಮತ್ತು ಭೂ-ಮೇಲ್ಮೈನಿಂದ ಸುಮಾರು 90 ಕಿಲೋಮೀಟರ್ ಎತ್ತರದಲ್ಲಿಯೇ ಸಂಪೂರ್ಣವಾಗಿ ಭಸ್ಮಗೊಳ್ಳುತ್ತವೆ. ಈ ರೀತಿಯ ಸಾವಿರಾರು ಕಣಗಳು ಹೊತ್ತಿ ಉರಿದು ಇಡೀ ಬಾನಂಗಳದಲ್ಲೇ ಬೆಂಕಿಯ ಕಿಡಿಮಳೆಗೆರೆಯುತ್ತವೆ. ಇದನ್ನು 'ಉಲ್ಕಾಪಾತ' ಅಥವಾ 'ಉಲ್ಕಾವೃಷ್ಟಿ' ಎಂದು ಕರೆಯುತ್ತಾರೆ.
ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ವರ್ಷದ ಎಲ್ಲಾ ರಜಾ ದಿನಗಳನ್ನು, ವಿಶೇಷ ದಿನಗಳನ್ನು ಕನ್ನಡದಲ್ಲಿ ನೋಡಲು 'ಗೂಗಲ್'ನ ಈ ಕ್ಯಾಲೆಂಡರ್ ಗಳನ್ನು ಅಕೌಂಟ್ ಗೆ ಸೇರಿಸಿ ಕೊಳ್ಳಿ.
ಶ್ರೀಮಂತನ ಕ್ಷಯವೇ ಡಾಕ್ಟರನ ಅಕ್ಷಯ ಪಾತ್ರೆ.