ದತ್ತಾತ್ರೇಯ ರಾಮಚಂದ್ರ ಬೇಂದ್ರೆ

D.R.Bendre

ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ.

ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ 'ನಾಕುತಂತಿ' ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಪ್ರಶಸ್ತಿ ಪುರಸ್ಕೃತ ಕೃತಿ 'ನಾಕುತಂತಿ' ನಲವತ್ತು ನಾಲ್ಕು ಕವನಗಳ ಒಂದು ಪುಟ್ಟ ಸಂಕಲನ ಗ್ರಂಥ. ಇದು ಆತ್ಮ-ಆಧ್ಯಾತ್ಮ, ಲೌಕಿಕ-ಪಾರಮಾರ್ಥ, ವ್ಯಕ್ತಿ-ಶಕ್ತಿ, ಕೃಷಿ-ರಾಜಕೀಯ, ಭಕ್ತಿ-ಬೋಧೆ, ಶ್ರವಣ-ಅಂತಃಕರಣ - ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ.

ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ಆಧ್ಯಾತ್ಮಿಕ ತಂತ್ರಗಳನ್ನು, ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಶೈಲಿ, ಗ್ರಾಮೀಣ ಮತ್ತು ಜಾನಪದ ಸಾಹಿತ್ಯ ಆಡುಭಾಷೆಯ ನುಡಿಗಟ್ಟುಗಳು ಯತೇಚ್ಛವಾಗಿ ಬಳಸಿದ್ದಾರೆ.

ದಾರ್ಶನಿಕತೆ ಬೇಂದ್ರೆ ಸಾಹಿತ್ಯದ ವಿಶೇಷತೆ. ಅವರ 'ಪಾತರಗಿತ್ತಿ ಪಕ್ಕ' ಕವನ, ಶಿಶು ಗೀತೆಯಾಗಿ ಹಾಡಲ್ಪಟ್ಟರೂ ಅದು ಮನುಷ್ಯನ ಪ್ರಲೋಭನೆಯನ್ನು ವಿವರಿಸುತ್ತದೆ. 'ಮೂಡಲಮನೆಯ' ಕವನವು ಸರ್ವ ವ್ಯಾಪಿ ಶಾಂತಿ ಮತ್ತು ಅದನ್ನು ಸ್ಥಾಪಿಸುವ ಕವಿಯ ಹಂಬಲದ ಪ್ರತೀಕವಾಗಿದೆ. ಹಾಗೆಯೇ 'ಕುಣಿಯೋಣು ಬಾರಾ' ಕವನವು ವೈವಿಧ್ಯಮಯವಾದ ವಿಚಾರ ಲಹರಿಗಳ ಮಹಾ ಸಂಗಮದ ದ್ಯೋತಕವಾಗಿದೆ. ಮೇಲ್ನೋಟಕ್ಕೆ ಬೇಂದ್ರೆಯವರ ಸಾಹಿತ್ಯವು ಪ್ರಾಸಬದ್ಧ ಸಂಗೀತಕ್ಕೆ ಅಳವಡಿಸಿಕೊಂಡತ್ತಿದ್ದರೂ ಅದರ ಒಳಾರ್ಥ ಕೇವಲ ಕಾವ್ಯಾತ್ಮಕ ಮನಸ್ಸು ಅರ್ಥಮಾಡಿಕೊಳ್ಳಬಲ್ಲಂತಹದು.

೧೯೨೬ರಲ್ಲಿ ಬೇಂದ್ರೆಯವರು ಧಾರವಾಡದಲ್ಲಿ 'ಗೆಳೆಯರ ಬಳಗ' ಸ್ಥಾಪಿಸಿದರು. 'ವಾಗ್ಭೂಷಣ', 'ಜಯ ಕರ್ನಾಟಕ', 'ಸ್ವಧರ್ಮ' ಮೊದಲಾದ ಪತ್ರಿಕೆಗಳು ಬಳಗದ ಮೂಲಕ ಪ್ರಕಟಗೊಳ್ಳುತ್ತಿದ್ದವು.

ಬೇಂದ್ರೆಯವರ ಕೆಲವು ಜನಪ್ರಿಯ ಕವಿತೆಗಳು ಇಲ್ಲಿವೆ.

ಸಂಕ್ಷಿಪ್ತ ಪರಿಚಯ

ಕಾವ್ಯನಾಮ ಅಂಬಿಕಾತನಯದತ್ತ
ನಿಜನಾಮ ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಜನನ ೧೮೯೬ ಜನವರಿ ೩೧
ಮರಣ ೧೯೮೧ ಅಕ್ಟೋಬರ್ 26
ತಂದೆ ರಾಮಚಂದ್ರ ಬೇಂದ್ರೆ
ತಾಯಿ ಅಂಬಕ್ಕ
ಜನ್ಮ ಸ್ಥಳ ದಾರವಾಡ
ಪತ್ನಿ ಲಕ್ಷ್ಮೀಬಾಯಿ

ಕವನ

೧. ಕೃಷ್ಣಕುಮಾರಿ 1922
೨. ಗರಿ 19೩೨
೩. ಸಖೀಗೀತ ೧೯೩೪
೪. ಉಯ್ಯಾಲೆ ೧೯೩೮
೫. ನಾದಲೀಲೆ ೧೯೩೮
೬. ಮೇಘದೂತ ೧೯೪೩
೭. ಹಾಡು-ಪಾಡು ೧೯೪೬
೮. ಗಂಗಾವತರಣ ೧೯೫೧
೯. ಅರಳು-ಮರಳು ೧೯೫೬
೧೦. ಸೂರ್ಯಪಾನ ೧೯೫೬
೧೧. ಹೃದಯ ಸಮುದ್ರ ೧೯೫೬
೧೨. ಮುಕ್ತಕಂಠ ೧೯೫೬
೧೩. ಚೈತ್ರಾಲಯ ೧೯೫೭
೧೪. ಜೀವನ ಲಹರಿ ೧೯೫೭
೧೫. ನಮನ ೧೯೫೮
೧೬. ಸಂಚಯ ೧೯೫೯
೧೭. ಉತ್ತರಾಯಣ ೧೯೬೦
೧೮. ಮುಗಿಲಮಲ್ಲಿಗೆ ೧೯೬೧
೧೯ ಯಕ್ಷ ಯಕ್ಷಿ ೧೯೬೨
೨೦. ನಾಕುತಂತಿ ೧೯೬೪
೨೧. ಮರ್ಯಾದೆ ೧೯೬೬
೨೨. ಶ್ರೀಮಾತಾ ೧೯೬೮
೨೩. ಬಾ ಹತ್ತರ ೧೯೬೯
೨೪. ಇದು ನಭೋವಾಣಿ ೧೯೭೦
೨೫. ವಿನಯ ೧೯‍೭೨
೨೬. ಮತ್ತೆ ಶ್ರಾವಣ ಬಂತು ೧೯೭೩

ವಿಮರ್ಶೆ

೧. ಸಾಹಿತ್ಯ ಮತ್ತು ವಿಮರ್ಶೆ 19೩೭
೨. ಸಾಹಿತ್ಯ ಸಂಶೋಧನೆ 19೪೦
೩. ವಿಚಾರ ಮಂಜರಿ ೧೯೪೫
೪. ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ ೧೯೫೪
೫. ಮಹಾರಾಷ್ಟ್ರ ಸಾಹಿತ್ಯ ೧೯೫೯
೬. ಕಾವ್ಯೋದ್ಯೋಗ ೧೯೬೨
೭. ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು ೧೯೬೮
೮. ಸಾಹಿತ್ಯದ ವಿರಾಟ್ ಸ್ವರೂಪ ೧೯೭೪
೯. 'ಕುಮಾರವ್ಯಾಸ' ಪುಸ್ತಿಕೆ ೧೯೭೬

ನಾಟಕ

೧. ಹುಚ್ಚಾಟಗಳು 19೩೬
೨. ಹೊಸ ಸಂಸಾರ ಮತ್ತಿತರ ನಾಟಕಗಳು 19೫೦

ಸಣ್ಣಕಥೆ, ಹರಟೆ

೧. ನಿರಾಭರಣ ಸುಂದರಿ 19೪೦

ಭಾಷಣಗಳು

೧. ಮಾತೆಲ್ಲ ಜ್ಯೋತಿ 19೭೧

ಅನುವಾದಗಳು

೧. ಉಪನಿಷತ್ ರಹಸ್ಯ (ಇಂಗ್ಲೀಷ್ ರಾನಡೆ) 19೨೮
೨. ಭಾರತೀಯ ನವಜನ್ಮ (ಇಂಗ್ಲೀಷ್, ಅರವಿಂದ) 19೩೬
೩. ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ ೧೯೪೭
೪. ಗುರು ಗೋವಿಂದ ಸಿಂಗ್ (ಇಂಗ್ಲೀಷ್) ೧೯೬೬
೫. ನೂರೊಂದು ಕವನ (ಠಾಕೂರ್) ೧೯೬೭
೬. ಕಬೀರ ವಚನಾವಲಿ (ಹಿಂದಿ) ೧೯೬೮
೭. ಭಗ್ನಮೂರ್ತಿ (ಮರಾಠಿ, ಅ.ರಾ. ದೇಶಪಾಂಡೆ) ೧೯೭೨

ಮರಾಠಿ ಸಾಹಿತ್ಯ

೧. ಸಂವಾದ-ಕವನ, ಮತ್ತು ವಿಮರ್ಶೆ, ಲೇಖನ 19೬೫
೨. ವಿಟ್ಠಲ ಸಂಪ್ರದಾಯ 19೬೫
೩. ಶಾಂತಲಾ (ಕನ್ನಡದಿಂದ) ೧೯೭೨

ಪ್ರಶಸ್ತಿ, ಪುರಸ್ಕಾರ, ಗೌರವ

೧೯೫೭ 'ಅರಳು-ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೫ ಮರಾಠಿ 'ಸಂವಾದ' ಗ್ರಂಥಕ್ಕೆ ಕೇಳ್ಕರ್ ಪ್ರಶಸ್ತಿ.
೧೯೬೬ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
೧೯೬೮ ಭಾರತ ಸರ್ಕಾರದ 'ಪದ್ಮಶ್ರೀ' ಪ್ರಶಸ್ತಿ.
೧೯೬೮ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
೧೯೭೪ 'ನಾಕುತಂತಿ' ಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ
೧೯೭೬ ಕಾಶೀ ವಿದ್ಯಾಪೀಠ, ವಾರಾಣಾಸಿ, ಇವರಿಂದ ಗೌರವ ಡಾಕ್ಟರೇಟ್ ಪದವಿ.

ಅಧ್ಯಕ್ಷತೆ, ಇತ್ಯಾದಿ

೧೯೩೦ ಮೈಸೂರು ಲೇಖಕರ ಗೋಷ್ಠಿ ಅಧ್ಯಕ್ಷ.
೧೯೩೫ ಮುಂಬಯಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೪೩ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.